ರಾಯಲ್ ಚಾಲೆಂಜರ್ಸ್ ಬೆಂಗಳೂರು woman ತಂಡ ಗೆದ್ದು 2026ರ ವೀರವನಿತೆಯರಾಗಿದ್ದಾರೆ

 ಡಬ್ಲ್ಯೂ ಪಿ ಎಲ್ ಫೈನಲ್ ನಲ್ಲಿ ಸ್ಮೃತಿ ಬಳಗ ದಿಟ್ಟ ಚೇಸಿಂಗ್! ಡೆಲ್ಲಿಗೆ ಸತತ ನಾಲ್ಕನೇ ಬಾರಿ ನಿರಾಸೆ 
 ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡ (RCB) ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ನಾಯಕಿ ಸ್ಮೃತಿ ಮಂದನ  87 ಹಾಗೂ ಜಾರ್ಜಿಯಾ ವುಲ್ 79 ಜೊತೆ ಆಟದ ಮೂಲಕ ಕಪ್ ಗೆಲ್ಲಲು ಇವರ ಆಟ ಪ್ರಮುಖವಾಗಿದೆ 

 ಆರ್‌ಸಿಬಿಗೆ ಬೃಹತ್ ಮೊತ್ತ ನೀಡಿ ಸವಾಲ್ ಎಸೆದ ಡೆಲ್ಲಿ ಕ್ಯಾಪಿಟಲ್ಸ್ 
 ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಗೆ 203 ರನ್ ಅನ್ನು ಕಲೆ ಹಾಕಿದರು. ಮೊದಲ ಜೋಡಿಯಾಗಿ ಲೆಜಿಲ್ ಲಿ  ಹಾಗೂ ಶಿಫಾಲಿ ವರ್ಮಾ ಇಬ್ಬರು ಸೇರಿ ಒಳ್ಳೆಯ ಜೊತೆ ಆಟವನ್ನು ನೀಡಿದರು. ಶಿಫಾಲಿ ಹಾಗೂ ಲೀ ಔಟಾದ ಬಳಿಕ ಲೌರ ವೊಲ್ಪರ್ಡ್44 ಹಾಗೂ ಜನಿಮಾ ರೋಡ್ರಿಗಸ್57 ಇವರ ಇಬ್ಬರ ಬ್ಯಾಟಿಂಗ್ ಅಬ್ಬರದಿಂದ ಆರ್‌ಸಿಬಿ ಬೋಲರ್ಸ್ ಗಳಿಗೆ ನೀರು ಕುಡಿಸಿದರು. ನಂತರ ಶಿನೆಲ್ ಹೆನ್ರಿ 35 ರನ್ಸ್ ಮೂಲಕ 203 ರನ್ಗಳನ್ನು ನೀಡಿದರು

 204 ರನ್ ಅನ್ನು ಸುಲಭವಾಗಿ ಬೆನ್ನಟ್ಟಿದ RCB ಯ ವನಿತೆಯರು 
 ಪ್ರಶಸ್ತಿಗಾಗಿ ಚೇಸಿಂಗ್ ಗೆ ಇಳಿದ ಶಿನೆಲ್ ಹೆನ್ರಿ ಆರಂಭಿಕ ಆಘಾತ ನೀಡಿದರು. ಗ್ರೇಸ್ ಹ್ಯಾರಿಸ್  (9) ಎರಡನೇ ಓವರ್ ನಲ್ಲಿ ಬೋಲ್ಡ್ ಆದರು. ನಂತರ ಸ್ಮೃತಿ ಮಂದನ ಜೊತೆಯಾದ ಜಾರ್ಜಿಯ ವೊಲ್ ಚೇಸಿಂಗ್ ಗೆ ಬಲ ತುಂಬಿದರು ಇವರಿಬ್ಬರು ಬರೋಬ್ಬರಿ 162 ರನ್ ಸೇರಿಸಿ, RCB ಹಾದಿ ಸುಲಭಗೊಳಿಸಿದರು. 23 ಎಸೆತಗಳಲ್ಲಿ ಆದರ್ಶತಕ ನಂತರ ಚೇಸಿಂಗ್ ಗೆ ವೇಗ ನೀಡಿದ ಸ್ಮೃತಿ ಮಂದನಾಗೆ ಜಾರ್ಜಿಯ ವೊಲ್ ಉತ್ತಮ ಬೆಂಬಲ ನೀಡಿದರು. ಜಾರ್ಜಿಯ ಔಟ್ ಆದ ಬೆನ್ನಲ್ಲೇ ರಿಚಾ ಘೋಶ್(6) ನಂತರ ಉಳಿದ ಬ್ಯಾಟ್ಸ್ ಮ್ಯಾನ್ ಗಳು ಪಂದ್ಯವನ್ನು ಮುಗಿಸಿದರು  

 ಯಶಸ್ವಿ ಚೇಸಿಂಗ್ 
 ಡಬ್ಲ್ಯೂ ಪಿ ಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಯಶಸ್ವಿ ಚೇಸಿಂಗ್ ಇದಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ಗುಜರಾತ್ ವಿರುದ್ಧ ಆರ್ ಸಿ ಬಿ ತಂಡ 202 ರನ್ ಬಿನ್ನಟ್ಟುವಲ್ಲಿ ಯಶಸ್ವಿಯಾಗಿತ್ತು 

 RCB ಪ್ರಾಂಚೈಸಿಗೆ ಹ್ಯಾಟ್ರಿಕ್ ಪ್ರಶಸ್ತಿ 
 ಸ್ಮೃತಿ ಮಂದನ ಪಡೆ ನಾಲ್ಕನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಆರ್‌ಸಿಬಿ ಪ್ರಾಂಚೈಸಿಗೆ ಟಿ20 ಲೀಗ್ ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದಂತಾಗಿದೆ. ಆರ್‌ಸಿಬಿ ಮಹಿಳಾ ತಂಡ 2024ರಲ್ಲಿ ಚುಚ್ಚಲ ಬಾರಿಗೆ ಡಬ್ಲ್ಯೂಪಿಎಲ್ ಟ್ರೋಪಿ ಜಯಿಸಿದರೆ, ಕಳೆದ ಐಪಿಎಲ್ ಆವೃತ್ತಿಯಲ್ಲಿ  ಆರ್‌ಸಿಬಿ 18 ವರ್ಷಗಳ ನಂತರ ಪ್ರಶಸ್ತಿ ಗೆದ್ದಿತ್ತು. ಈ ಮೂಲಕ ಏಕಕಾಲದಲ್ಲಿ ಪುರುಷರ ಮಹಿಳೆಯರ ಲೀಗ್ ಗಳಲ್ಲಿ ಚಾಂಪಿಯನ್ ಎನಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯು ಆರ್‌ಸಿಬಿ ತಂಡದಾಗಿದೇ

 ಗರಿಷ್ಠ ಸಾಧಕರು 

 ಡಬ್ಲ್ಯೂ ಪಿ ಎಲ್ ನಲ್ಲಿ ಅತಿ ಹೆಚ್ಚು ರನ್ ಸ್ಮೃತಿ ಮಂದಾನ(377)
 ಡಬ್ಲ್ಯೂ ಪಿ ಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳು ಸೊಫಿ ಡಿ ವೈನ್ (17), Busy ನಂದಿನಿ ಶರ್ಮ( 17)

ಪ್ಲೇಯರ್ ಆಫ್ ದಿ ಸಿರೀಸ್
ಸೋಫಿ devine( ಗುಜರಾತ್ ಜೆಂಟ್ಸ್ )


Comments

Post a Comment

Popular posts from this blog