ಬರಿ ವಂಶವೃಕ್ಷವಿದ್ದರೆ ಸಾಲದು ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಬೇಕಾಗುವ 5 ಪ್ರಮುಖ ದಾಖಲೆಗಳು ಯಾವುವು ? : ಕೇವಲ ಬಾಯಿ ಮಾತಿನಿಂದ ಆಸ್ತಿ ನಿಮ್ಮದಾಗುವುದಿಲ್ಲ; ಅದನ್ನು ಕಾನೂನುಬದ್ಧವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಕೆಲವು ನಿರ್ಣಾಯಕ ಹಂತಗಳನ್ನು ದಾಟಬೇಕಾಗುತ್ತದೆ. ಹಾಗಾದರೆ ನಿಮ್ಮ ಪಿತ್ರಾರ್ಜಿತ ಸ್ವತ್ತನ್ನು ಪತ್ತೆ ಹಚ್ಚುವುದು ಹೇಗೆ? ಗಡಿ ಗುರುತಿಸುವುದು ಮತ್ತು ಕಳೆದುಹೋದ ಹಕ್ಕನ್ನು ಮರಳಿ ಪಡೆಯಲು ನೀವು ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಗಳೇನು? ನಿಮ್ಮ ಪೂರ್ವಜರ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಸಂಪೂರ್ಣ ಮಾರ್ಗಸೂಚಿಯನ್ನು ನಾವು ಈ ಲೇಖನದಲ್ಲಿ ನಿಮಗಾಗಿ ವಿವರವಾಗಿ ನೀಡುತ್ತಿದ್ದೇವೆ. ಮಾಹಿತಿಯೇ ಶಕ್ತಿ ತಡಮಾಡಬೇಡಿ ನಿಮ್ಮ ಆಸ್ತಿಯ ಹಕ್ಕನ್ನು ಇಂದೇ ಭದ್ರಪಡಿಸಿಕೊಳ್ಳಿ ಪಿತ್ರಾರ್ಜಿತ ಆಸ್ತಿಯನ್ನು ಕಂಡುಹಿಡಿಯುವುದು ಹೇಗೆ? ನಿಮ್ಮ ಪೂರ್ವಜರ ಆಸ್ತಿಯ ಮಾಲೀಕತ್ವವನ್ನು ಸ್ಥಾಪಿಸಲು ಮತ್ತು ಅದನ್ನು ನಿಮ್ಮ ಹೆಸರಿಗೆ ವರ್ಗಾಯಿಸಲು, ಮೊದಲು ನೀವು ಈ ಕೆಳಗಿನ ಮೂಲ ಮತ್ತು ನಿರ್ಣಾಯಕ ಕಾನೂನು ದಾಖಲೆಗಳನ್ನು ಶೋಧಿಸಬೇಕು ಮತ್ತು ಪರಿಶೀಲಿಸಬೇಕು. ಮನೆಯಲ್ಲಿರುವ ಹಳೆಯ ಪತ್ರಗಳ ಪರಿಶೀಲನೆ ಮಾರಾಟ ಪತ್ರಗಳು (Sale Deeds): ಆಸ್ತಿಯನ್ನು ಯಾವ ದಿನಾಂಕದಂದು ಮತ್ತು ಯಾರಿಂದ ಖರೀದಿಸಲಾಗಿತ್ತು ಎಂಬುದನ್ನು ಇದು ದೃಢೀಕರಿಸುತ್ತದೆ. ಆಸ್ತಿ ವಿಭಜನೆ ಪತ್ರಗಳು (Partiti...
ರಾಯಲ್ ಚಾಲೆಂಜರ್ಸ್ ಬೆಂಗಳೂರು woman ತಂಡ ಗೆದ್ದು 2026ರ ವೀರವನಿತೆಯರಾಗಿದ್ದಾರೆ ಡಬ್ಲ್ಯೂ ಪಿ ಎಲ್ ಫೈನಲ್ ನಲ್ಲಿ ಸ್ಮೃತಿ ಬಳಗ ದಿಟ್ಟ ಚೇಸಿಂಗ್! ಡೆಲ್ಲಿಗೆ ಸತತ ನಾಲ್ಕನೇ ಬಾರಿ ನಿರಾಸೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ನಾಯಕಿ ಸ್ಮೃತಿ ಮಂದನ 87 ಹಾಗೂ ಜಾರ್ಜಿಯಾ ವುಲ್ 79 ಜೊತೆ ಆಟದ ಮೂಲಕ ಕಪ್ ಗೆಲ್ಲಲು ಇವರ ಆಟ ಪ್ರಮುಖವಾಗಿದೆ ಆರ್ಸಿಬಿಗೆ ಬೃಹತ್ ಮೊತ್ತ ನೀಡಿ ಸವಾಲ್ ಎಸೆದ ಡೆಲ್ಲಿ ಕ್ಯಾಪಿಟಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಗೆ 203 ರನ್ ಅನ್ನು ಕಲೆ ಹಾಕಿದರು. ಮೊದಲ ಜೋಡಿಯಾಗಿ ಲೆಜಿಲ್ ಲಿ ಹಾಗೂ ಶಿಫಾಲಿ ವರ್ಮಾ ಇಬ್ಬರು ಸೇರಿ ಒಳ್ಳೆಯ ಜೊತೆ ಆಟವನ್ನು ನೀಡಿದರು. ಶಿಫಾಲಿ ಹಾಗೂ ಲೀ ಔಟಾದ ಬಳಿಕ ಲೌರ ವೊಲ್ಪರ್ಡ್44 ಹಾಗೂ ಜನಿಮಾ ರೋಡ್ರಿಗಸ್57 ಇವರ ಇಬ್ಬರ ಬ್ಯಾಟಿಂಗ್ ಅಬ್ಬರದಿಂದ ಆರ್ಸಿಬಿ ಬೋಲರ್ಸ್ ಗಳಿಗೆ ನೀರು ಕುಡಿಸಿದರು. ನಂತರ ಶಿನೆಲ್ ಹೆನ್ರಿ 35 ರನ್ಸ್ ಮೂಲಕ 203 ರನ್ಗಳನ್ನು ನೀಡಿದರು 204 ರನ್ ಅನ್ನು ಸುಲಭವಾಗಿ ಬೆನ್ನಟ್ಟಿದ RCB ಯ ವನಿತೆಯರು ಪ್ರಶಸ್ತಿಗಾಗಿ ಚೇಸಿಂಗ್ ಗೆ ಇಳಿದ ಶಿನೆಲ್ ಹೆನ್ರಿ ಆರಂಭಿಕ ಆಘಾತ ನೀಡಿದರು. ಗ್ರೇಸ್ ಹ್ಯಾರಿಸ್ (9) ಎರಡನೇ ಓವರ್ ನಲ...
Comments
Post a Comment