: ತೂಕ ಇಳಿಕೆಗಾಗಿ GLP-1 ಔಷಧಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ

: ಇದೀಗ ಸುದ್ದಿಯಲ್ಲಿದೆ:-

* ಸ್ಥೂಲಕಾಯ ಅಥವಾ ಬೊಜ್ಜು ನಿರ್ವಹಣೆಗಾಗಿ ಗ್ಲುಕಗನ್ ಲೈಕ್  ಪೆಪ್ಟೈಡ್-1'(GLP-1) ಚಿಕಿತ್ಸೆಗಳನ್ನು ಬಳಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

 ಗ್ಲುಕಗನ್ - ಲೈಕ್ ಪೆಪ್ಟೈಡ್ -1(GLP-1) ಚಿಕಿತ್ಸೆಗಳ ಬಗ್ಗೆ

: * ಬೊಜ್ಜು ನಿರ್ವಹಣೆಗಾಗಿ ಇರುವ ಔಷಧ : GLP-1 ಚಿಕಿತ್ಸೆಗಳು ( ಗ್ಲುಕಾಗನ್ - ಲೈಕ್ ಪೇಪಾಡ್ -1 ರೆಸೆಪ್ಟರ್ ಆಗೋನಿಸ್ಟ್ ಗಳು ) ಒಂದು ನಿರ್ದಿಷ್ಟ ವರ್ಗದ ಔಷಧಿಗಳಾಗಿವೆ.

* ಇವು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ GLP-1 ಹಾರ್ಮೋನ್ ಅನ್ನು ಅನುಕರಿಸುತ್ತದೆ.

* ತೂಕ ಇಳಿಕೆ ಸಹಕಾರಿ : ಈ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಈ ಮೂಲಕ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.

ಸ್ಥೂಲಕಾಯ ( ಬೊಜ್ಜು ) ದ ಬಗ್ಗೆ :

* ದೀರ್ಘಕಾಲದ ಸಂಕೀರ್ಣ ಕಾಯಿಲೆ : ಇದು ದೇಹದಲ್ಲಿ ಅತಿಯಾದ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ದೀರ್ಘಕಾಲದ ಸಂಕೀರ್ಣ ಕಾಯಿಲೆಯಾಗಿದೆ 

* ದುಷ್ಪರಿಣಾಮ: ಇದು ಟೈಪ್ 2 'ಮಧುಮೇಹ ' ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಮೂಳೆಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲು ದುಷ್ಪರಿಣಾಮ ಬೀರಬಹುದು.

* ಋಣಾತ್ಮಕ ಪ್ರಭಾವ: ಇದು ನಿರ್ದಿಷ್ಟ ಬಗೆಯ ಕ್ಯಾನ್ಸರ್ ಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ನಿದ್ರೆ ಅಥವಾ ದೈಹಿಕ ಚಲನೆ ಯಂತಹ ಜೀವನದ ಗುಣಮಟ್ಟದ ಮೇಲು ಋಣಾತ್ಮಕ ಪ್ರಭಾವ ಬೀರುತ್ತದೆ

* ಭಾರತದ ಅಂಕಿ- ಅಂಶ : ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ರ (NFHS-5) ದತ್ತಾಂಶದ ಪ್ರಕಾರ, ಭಾರತದಲ್ಲಿ 24% ರಷ್ಟು ಮಹಿಳೆಯರು ಮತ್ತು 23% ರಷ್ಟು ಪುರುಷರು ಸ್ಥೂಲಕಾಯ ಸಮಸ್ತೆಯಿಂದ ಬಳಲುತ್ತಿದ್ದಾರೆ.

Comments

Popular posts from this blog