ಸತತ ಆರನೇ ಬಾರಿ ಭಾರತದ ಕಿರಿಯರ ವಿಶ್ವಕಪ್ ವಿಕ್ರಮ:


 ಫೈನಲ್ ಅಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಶತಕಕ್ಕೆ ಇಂಗ್ಲೆಂಡ್ ತತ್ತರ 
                                                      
   ಭಾರತ ತಂಡ ಐಸಿಸಿ 19 ವಯೋಮಿತಿ ಏಕದಿನ ವಿಶ್ವಕಪ್ 16ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಕೇರಿದೆ. 14 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ  (175 ರನ್, 80 ಎಸೆತ, 15 ಬೌಂಡರಿ, 15 ಸಿಕ್ಸರ್ ) ಗಳಿಂದ ಸ್ಪೋಟಕದ ಶತಕವನ್ನು ಮಾಡಿ ಇಂಗ್ಲೆಂಡ್ ಅವರಿಗೆ ಸೋಲಿನ ರುಚಿಯನ್ನು ತೋರಿಸಿದರು.

 ಇಂಗ್ಲೆಂಡಿಗೆ ಬೃಹತ್  ಮೊತ್ತ ನೀಡಿದ  ಇಂಡಿಯಾ
 ಇಂಡಿಯಾ ತಂಡವು 411 ಅನ್ನು ಟಾರ್ಗೆಟ್ ನೀಡಿದರು, 
ವೈಭವ್ ಸೂರ್ಯವಂಶಿ 175, 
ಆಯುಷ್ ಮಾತ್ರೆ 53, 
ವೇದಾಂತ್ 32,
 ವಿಹಾನ್ 30, 
ಅಭಿಜ್ಞಾನ್ 40 
 ಅಂಬರೀಶ್ 18 
 ತನಿಷ್ 37 ಆಟದ ಮೂಲಕ ಉತ್ತಮ ಮೊತ್ತವನ್ನು ಕಲೆಹಾಕಿದರು.

 ಪ್ರಧಾನಿ ಅಭಿನಂದನೆ :
                             ಮಿಂಚುತ್ತಿದೆ ಭಾರತೀಯ ಕ್ರಿಕೆಟ್ ಪ್ರತಿಭೆಗಳು. ವಿಶ್ವಕಪ್ ಟ್ರೋಫಿಯನ್ನು ಗೆದ್ದು ಕೊಟ್ಟಿರುವ ತಂಡದ ಬಗ್ಗೆ ಹೆಮ್ಮೆ ಇದೆ. ಇದು ಭವಿಷ್ಯದ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿದೆ' ಎಂದು ವಿಶ್ವ ವಿಜೇತ ಕಿರಿಯರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

 ಆಯುಷ್ ಮಾತ್ರೆಗೆ ಕಿರೀಟ
                                 ಆಯುಷ್ ಮಾತ್ರೆ ಕಿರಿಯರ ವಿಶ್ವಕಪ್ ಟ್ರೋಪಿ ಜಯಿಸಿದ  6 ಭಾರತೀಯ ನಾಯಕ. ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ವನ್ಮುಕ್ತ ಚಾಂದ್, ಪೃಥ್ವಿ ಶಾ, ಯಶ್ ದುಲ್ ಹಿಂದಿನ ಸಾಧಕರು ಆಗಿದ್ದಾರೆ .





 ಗೆಲುವಿನ ವೈಭವ ಯಾತ್ರೆ

 
80 ಬಾಲ್,
 175 ರನ್ 
 15 ಬೌಂಡರಿ,
 15 ಸಿಕ್ಸರ್,
 ಟೂರ್ನಿಯಲ್ಲಿ ಒಟ್ಟು 30 ಸಿಕ್ಸು 
 ಪಂದ್ಯ ಪುರುಷ : ವೈಭವ್ ಸೂರ್ಯವಂಶಿ,
 ಫೈನಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ದಾಖಲೆ ಮಾಡಿದ ವೈಭವ ಸೂರ್ಯವಂಶಿ.



 ಆರನೇ ಬಾರಿ ವಿಶ್ವಕಿರೀಟ 
                               2000( ಮೊಹಮ್ಮದ್ ಕೈಫ್ ), 2008 ( ವಿರಾಟ್ ಕೊಹ್ಲಿ ), 2012 ( ವನ್ಮುಕ್ತ ಚಾಂದ್), 2018 ( ಪೃಥ್ವಿ ಶಾ ), 2022 ( ಯಶ್ ದುಲ್ ), ನಂತರ ಈಗ 2026ರಲ್ಲಿ ಭಾರತ 6ವಿಶ್ವಕಪ್ ಎತ್ತಿ ಹಿಡಿದಿದೆ. ಆಯುಷ್ ಮಾತ್ರೆ ನೇತೃತ್ವದ ಈ ಯುವ ತಂಡ ಟೂರ್ನಿ ಯುದ್ಧಕ್ಕೂ ಅಜೇಯವಾಗಿ ಉಳಿಯುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಟಿ. 20 ವಿಶ್ವಕಪ್ ಆರಂಭಕ್ಕೆ ಮುನ್ನ ವಿಶ್ವಕಪ್ ಗೆಲ್ಲುವ ಮೂಲಕ ಈ ತಂಡ ಹಿರಿಯರ ತಂಡಕ್ಕೆ ಸ್ಪೂರ್ತಿ ತುಂಬಿದೆ. ಬಿಸಿಸಿಐ ಕೂಡ ಕಿರಿಯರ ಈ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದೆ.


               ಭಾರತ ಹಾಲಿ ಚಾಂಪಿಯನ್ ಆಗಿರುವ ಐಸಿಸಿ ಟೂರ್ನಿಗಳು:- 
                           * 19 ವಯೋಮಿತಿ ಪುರುಷರ ಏಕದಿನ ವಿಶ್ವಕಪ್ 
                          * 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ 
                           * ಪುರುಷರ ಟಿ 20 ವಿಶ್ವ ಕಪ್ 
                           * ಮಹಿಳಾ ಏಕದಿನ ವಿಶ್ವಕಪ್ 
                          * ಚಾಂಪಿಯನ್ ಟ್ರೋಫಿ 

Comments

Popular posts from this blog